India's Best Captain: ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರಕಾರ ಇವರೇ ಟೀಂ ಇಂಡಿಯಾದ ಅತ್ಯುತ್ತಮ ಕ್ಯಾಪ್ಟನ್

India's Best Captain: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಸಾಧಿಸಿದ ಸಾಧನೆಯನ್ನು ಇನ್ನಾವ ನಾಯಕನೂ ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಧೋನಿಯನ್ನು ಅತ್ಯುತ್ತಮ ನಾಯಕ ಎಂದು ಬಣ್ಣಿಸದವರೂ ಇದ್ದಾರೆ.

Written by - Yashaswini V | Last Updated : Dec 7, 2021, 08:19 AM IST
  • ಮುಂಬೈನಲ್ಲಿ ಜಯ ಸಾಧಿಸುವುದರೊಂದಿಗೆ ಭಾರತ ತವರಿನಲ್ಲಿ ಸತತ 14ನೇ ಸರಣಿ ಜಯ ದಾಖಲಿಸಿದೆ
  • ಈ ಮಧ್ಯೆ ಇರ್ಫಾನ್ ಪಠಾಣ್ ಅವರ ದೊಡ್ಡ ಹೇಳಿಕೆ
  • ಈ ಆಟಗಾರನಿಗೆ ಅತ್ಯುತ್ತಮ ನಾಯಕ ಎಂದು ಹೇಳಿದ ಇರ್ಫಾನ್ ಪಠಾಣ್
India's Best Captain: ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರಕಾರ ಇವರೇ ಟೀಂ ಇಂಡಿಯಾದ ಅತ್ಯುತ್ತಮ ಕ್ಯಾಪ್ಟನ್  title=
India's Best Captain

India's Best Captain: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಸಾಧಿಸಿದ ಸಾಧನೆಯನ್ನು ಇನ್ನಾವ ನಾಯಕನೂ ಮಾಡಿಲ್ಲ. ಧೋನಿ ನಾಯಕತ್ವದಲ್ಲಿ ಭಾರತ ಎರಡು ಬಾರಿ ವಿಶ್ವಕಪ್ ಮತ್ತು ಒಮ್ಮೆ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಆದರೆ ಈ ನಡುವೆ ಟೀಂ ಇಂಡಿಯಾದ ಅನುಭವಿ ಆಟಗಾರನೊಬ್ಬ ಧೋನಿಗಿಂತಲೂ ಉತ್ತಮ ನಾಯಕನೆಂದು ಭಾವಿಸುವ ಆಟಗಾರನ ಹೆಸರನ್ನು ಹೇಳಿದ್ದಾರೆ. 

ಈ ಆಟಗಾರನಿಗೆ ಅತ್ಯುತ್ತಮ ನಾಯಕ ಎಂದ ಇರ್ಫಾನ್ ಪಠಾಣ್:
ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಮುಂಬೈ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಗೆದ್ದಿದ್ದಕ್ಕಾಗಿ ನಾಯಕ ವಿರಾಟ್ ಕೊಹ್ಲಿಯನ್ನು (Virat Kohli) ಹೊಗಳಿದ್ದು, ಕೊಹ್ಲಿ ಭಾರತ ಕಂಡ ಅತ್ಯುತ್ತಮ ಟೆಸ್ಟ್ ನಾಯಕ ಎಂದು ಹೇಳಿದ್ದಾರೆ.  'ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ 372 ರನ್‌ಗಳ ಬೃಹತ್ ಅಂತರದಿಂದ ಬ್ಲ್ಯಾಕ್ ಕ್ಯಾಪ್ಸ್ ಅನ್ನು ಸೋಲಿಸಿದ ನಂತರ ಕೊಹ್ಲಿ ನೇತೃತ್ವದ ತಂಡವು ಸರಣಿಯನ್ನು ವಶಪಡಿಸಿಕೊಂಡಿದೆ. ಟ್ವಿಟರ್‌ನಲ್ಲಿ ಈ ಕುರಿತಂತೆ ಬರೆದಿರುವ ಇರ್ಫಾನ್, 'ನಾನು ಮೊದಲೇ ಹೇಳಿದಂತೆ ಮತ್ತು ಮತ್ತೊಮ್ಮೆ ಅದನ್ನೇ ಹೇಳುತ್ತಿದ್ದೇನೆ, ಕೊಹ್ಲಿ ಭಾರತ ಕಂಡ ಅತ್ಯುತ್ತಮ ಟೆಸ್ಟ್ ನಾಯಕ. 59.09 ರಷ್ಟು ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ- ನೂತನ ದಾಖಲೆ ನಿರ್ಮಿಸಿದ ನಾಯಕ ವಿರಾಟ್ ಕೊಹ್ಲಿ

ವಿರಾಟ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ:
ಮುಂಬೈನಲ್ಲಿ ಜಯ ಸಾಧಿಸುವುದರೊಂದಿಗೆ ಭಾರತ (Team India) ತವರಿನಲ್ಲಿ ಸತತ 14ನೇ ಸರಣಿ ಜಯ ದಾಖಲಿಸಿದೆ. ಅದೇ ಹೊತ್ತಿಗೆ ಕೊಹ್ಲಿ ನಾಯಕತ್ವದಲ್ಲಿ ಸತತ 11ನೇ ಜಯ ಸಾಧಿಸಿತು. ತವರಿನ ಸರಣಿ ಗೆಲುವಿನೊಂದಿಗೆ ಭಾರತ 12 ಅಂಕ ಗಳಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಲುಪಿದೆ. ಈಗ 124 ಅಂಕ ಪಡೆದಿದೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್ 121 ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಡಿಸೆಂಬರ್ 8ರಿಂದ ಆಶಸ್ ಸರಣಿ ಆರಂಭಿಸಲಿರುವ ಆಸ್ಟ್ರೇಲಿಯಾ 108 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್  ಆಸ್ಟ್ರೇಲಿಯಾದಿಂದ ಕೇವಲ ಒಂದು ಅಂಕ ಹಿಂದೆ  ಇದ್ದು ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ (92), ದಕ್ಷಿಣ ಆಫ್ರಿಕಾ (88), ಶ್ರೀಲಂಕಾ (83), ವೆಸ್ಟ್ ಇಂಡೀಸ್ (75), ಬಾಂಗ್ಲಾದೇಶ (49), ಮತ್ತು ಜಿಂಬಾಬ್ವೆ (31) ನಂತರದ ಸ್ಥಾನದಲ್ಲಿವೆ. ಭಾರತ ಇದೀಗ ಡಿಸೆಂಬರ್ 26 ರಿಂದ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

ಇದನ್ನೂ ಓದಿ- ಮಾಯಾಂಕ್ ಅಗರ್ವಾಲ್ ಭಾರತೀಯ ತಂಡದ ಆಸ್ತಿ- ನಾಯಕ ವಿರಾಟ್ ಕೊಹ್ಲಿ

ಮುಂಬೈ ಟೆಸ್ಟ್‌ನಲ್ಲಿ ಗೆಲುವು:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಾಲ್ಕನೇ ದಿನ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ವಶಪಡಿಸಿಕೊಂಡಿದೆ. ಭಾರತದ ಆಟಗಾರರು ವಾಂಖೆಡೆಯಲ್ಲಿ ಕಾನ್ಪುರ ಟೆಸ್ಟ್ ಅನ್ನು ಪೂರ್ಣಗೊಳಿಸಿದರು. ನ್ಯೂಜಿಲೆಂಡ್ ವಿರುದ್ಧ, ಈ ಟೆಸ್ಟ್ ಪಂದ್ಯ ಮತ್ತು ಸರಣಿಯನ್ನು ವಶಪಡಿಸಿಕೊಳ್ಳಲು ಟೀಂ ಇಂಡಿಯಾಕ್ಕೆ ಸೋಮವಾರ ಕೇವಲ 4 ವಿಕೆಟ್ ಗಳ ಅವಶ್ಯಕತೆಯಿತ್ತು, ಅದನ್ನು ಅವರು ಸುಲಭವಾಗಿ ಸಾಧಿಸಿದರು. ಭಾರತ ಕಿವೀಸ್ ತಂಡವನ್ನು 372 ರನ್‌ಗಳಿಂದ ಸೋಲಿಸಿತು. ಇದು ಭಾರತ ಕ್ರಿಕೆಟ್ ತಂಡಕ್ಕೆ ರನ್ ಗಳಿಕೆಯಲ್ಲಿ ಅತಿ ದೊಡ್ಡ ಗೆಲುವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News